Archive for July, 2008

ಕ್ಷಮೆಗಳ ಭಾರ   ಮಾತಾಡದೆ ಹಲವು ವರ್ಷಗಳೇ ಕಳೆದವು ಮಾತು ಎಲ್ಲಿ ಮನೆ ಮುರಿಯುವುದೋ ಎಂದು ಅಳುಕಿ ಸುಮ್ಮನಿದ್ದೆ. ಈ ಮಳೆಗಾಲ ಧೋ ಎಂದು ಮಳೆಸುರಿದು ಇದ್ದಕಿದ್ದಂತೆ ಬೆಂಗಳೂರಿನ ಮೋಡ ಕರಗಿ ನವೆಂಬರಿನಲ್ಲೇ ಚಳಿ ಮೊಳೆ ಕೊರೆದಾಗ  ಒಂದು ಸಂಜೆ ಹೆಪ್ಪುಗಟ್ಟುತ್ತಿದ್ದ ರಕ್ತ ಮಾತಾಡಿತು. ಪ್ರೀತಿಯ ಮೊದಲ ಪಟ್ಟು ಕಲಿಸಿದ ಗುರು ಅವಳು ಶಬ್ದದ ಲಜ್ಜೆಯುಕ್ಕಿಸಬಲ್ಲ ಹುಡುಗಿ ಈಗ ಮೋಹದ ಮಾಯೆಯನ್ನೂ ಮೀರಿದಳೆ? ನನ್ನ ಕ್ಷಮೆಗಳ ಭಾರ ಹೆಚ್ಚುತ್ತಿದೆ. – ಕಿರಣ್