ಕ್ಷಮೆಗಳ ಭಾರ ಮಾತಾಡದೆ ಹಲವು ವರ್ಷಗಳೇ ಕಳೆದವು ಮಾತು ಎಲ್ಲಿ ಮನೆ ಮುರಿಯುವುದೋ ಎಂದು ಅಳುಕಿ ಸುಮ್ಮನಿದ್ದೆ. ಈ ಮಳೆಗಾಲ ಧೋ ಎಂದು ಮಳೆಸುರಿದು ಇದ್ದಕಿದ್ದಂತೆ ಬೆಂಗಳೂರಿನ ಮೋಡ ಕರಗಿ ನವೆಂಬರಿನಲ್ಲೇ ಚಳಿ ಮೊಳೆ ಕೊರೆದಾಗ ಒಂದು ಸಂಜೆ ಹೆಪ್ಪುಗಟ್ಟುತ್ತಿದ್ದ ರಕ್ತ ಮಾತಾಡಿತು. ಪ್ರೀತಿಯ ಮೊದಲ ಪಟ್ಟು ಕಲಿಸಿದ ಗುರು ಅವಳು ಶಬ್ದದ ಲಜ್ಜೆಯುಕ್ಕಿಸಬಲ್ಲ ಹುಡುಗಿ ಈಗ ಮೋಹದ ಮಾಯೆಯನ್ನೂ ಮೀರಿದಳೆ? ನನ್ನ ಕ್ಷಮೆಗಳ ಭಾರ ಹೆಚ್ಚುತ್ತಿದೆ. – ಕಿರಣ್
Archive for the ‘ಕನ್ನಡ’ Category
ರಾಜು ಮೇಷ್ಟ್ರು ಇನ್ನಿಲ್ಲ
Posted: December 28, 2007 in ಕನ್ನಡ, ಕರ್ನಾಟಕ, ಬೆಂಗಳೂರು, Literature, UncategorizedTags: Chi Srinivasa Raju, Christ College Kannada Sangha, Kannada, Raju Meshtru
ಚಿ ಶ್ರೀನಿವಾಸ ರಾಜು ಮೇಷ್ಟ್ರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಇಂದು ಮನಸ್ಸೇ ಮುದುಡಿ ಹೋಗಿದೆ. ಸರಿ ಸುಮಾರು ಮೂರು ತಲೆಮಾರಿನ ಕವಿಗಳ ದಾರಿಗೆ ದೀಪವಾಗಿದ್ದ ಮೇಷ್ಟ್ರು ಇಂದು ಇಲ್ಲ ಎನ್ನುವ ಸುದ್ದಿಯೇ ಬೆಳಗ್ಗೆಯಿಂದ ಮಂಕು ಕವಿಸಿದೆ..