ನಮ್ಮ ತಲೆಮಾರಿನ ಯುವಕರಲ್ಲಿ ಸಾಮಾಜಿಕ ಬದ್ದತೆಯನ್ನು ಕಾರ್ಯಗತ ಮಾಡಲು ಹೆಣಗುತ್ತಿರುವ ಕೆಲವೇ ಕೆಲವರಲ್ಲಿ ಪ್ರಶಾಂತ್ ಕೂಡ ಒಬ್ಬರು. ನಾನು ಪ್ರಶಾಂತ್ರನ್ನು ಮೊದಲ ಬಾರಿಗೆ ನೋಡಿದ್ದು 1998 ರಲ್ಲಿ ಕುವೆಂಪು ಯುನಿವರ್ಸಿಟಿಯ ಆವರಣದಲ್ಲಿ. ಅಲ್ಲಿಗೆ ತಮ್ಮ ಎಂಫಿಲ್ ಪದವಿಗಾಗಿ ಅಲೆಯುತ್ತಿದ್ದ ಪ್ರಶಾಂತ್ ಪರಿಚಯವಾದಾಗ ಕರ್ನಾಟಕದ ಜನಸಮುದಾಯಗಳ ಬಗ್ಗೆ ಸಮಗ್ರವಾದ ಚಿತ್ರಣವನ್ನು ಕಲೆಹಾಕಲು ಪ್ರಯತ್ನಿಸುತ್ತಿದ್ದರು. ಕರ್ನಾಟಕದಲ್ಲಿರುವ ಎಲ್ಲ ಜಾತಿಗಳು ಮತ್ತು ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ರೀತಿ ನೀತಿಗಳ ಬಗ್ಗೆ ಅವರು ನಡೆಸುತ್ತಿದ್ದ ಸಂಶೋದನೆ ಹಾಗು ಕಲೆ ಹಾಕುತ್ತಿದ್ದ ವಿವರಗಳನ್ನು [...]
Archive for the ‘Uncategorized’ Category
ರಾಜು ಮೇಷ್ಟ್ರು ಇನ್ನಿಲ್ಲ
Posted: December 28, 2007 in ಕನ್ನಡ, ಕರ್ನಾಟಕ, ಬೆಂಗಳೂರು, Literature, UncategorizedTags: Chi Srinivasa Raju, Christ College Kannada Sangha, Kannada, Raju Meshtru
ಚಿ ಶ್ರೀನಿವಾಸ ರಾಜು ಮೇಷ್ಟ್ರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಇಂದು ಮನಸ್ಸೇ ಮುದುಡಿ ಹೋಗಿದೆ. ಸರಿ ಸುಮಾರು ಮೂರು ತಲೆಮಾರಿನ ಕವಿಗಳ ದಾರಿಗೆ ದೀಪವಾಗಿದ್ದ ಮೇಷ್ಟ್ರು ಇಂದು ಇಲ್ಲ ಎನ್ನುವ ಸುದ್ದಿಯೇ ಬೆಳಗ್ಗೆಯಿಂದ ಮಂಕು ಕವಿಸಿದೆ..
ಹೀಗೇ ಒಂದು ಸಂಜೆ ಒಂಟಿಯಾಗಿ ಕುಳಿತಿದ್ದ ಅಜ್ಜಿಯ ಬಳಿಗೆ ಬಂದು ಕೂತ ಮೊಮ್ಮಗ ಅದೂ ಇದೂ ಅಂತ ಮಾತಿಗಿಳಿದ. ಮಾತು ಮಾತಲ್ಲೆ “ಅಜ್ಜಿ ನಮ್ಮ ಕಾಲದ ಬಗ್ಗೆ ನಿನಗೆ ಏನನ್ನಿಸುತ್ತಜ್ಜಿ?” ಅಂತಲೂ ಕೇಳಿದ. ಕ್ಷಣ ಕಾಲ ಸುಮ್ಮನೇ ಯೋಚಿಸಿದ ಅಜ್ಜಿ ಹೇಳಿದಳು: “ನಾನು ಹುಟ್ಟಿದಾಗ ಇನ್ನೂ ಟಿ.ವಿ., ಪೆನ್ಸಿಲಿನ್, ಪೋಲಿಯೋ ಲಸಿಕೆ, ಜೆರಾಕ್ಸ್, ಕಾಂಟ್ಯಾಕ್ಟ್ ಲೆನ್ಸ್ ಇವ್ಯಾವೂ ಹುಟ್ಟಿರಲಿಲ್ಲ. ರಡಾರ್ ಇರಲಿಲ್ಲ, ಕ್ರೆಡಿಟ್ ಕಾರ್ಡು, ಲೇಸರ್ ಕಿರಣ… ಇವೆಲ್ಲಾ ಹೋಗಲಿ ಬಾಲ್ ಪಾಯಿಂಟ್ ಪೆನ್ನು ಕೂಡ ಹುಟ್ಟಿರಲಿಲ್ಲ. [...]
ಸಿಗರೇಟು ಬಿಡುವ ಬಗ್ಗೆ ಸಿಗರೇಟು ಸೇದುವ ಎಲ್ಲರೂ ಒಂದಿಲ್ಲೊಮ್ಮೆ ಅಥವಾ ಆಗಾಗ್ಗೆ ಯೋಚಿಸುತ್ತಲೇ ಇರುತ್ತಾರೆ. ಆದರೆ ಸಿಗರೇಟಿಗೆ ಅಂಟಿಕೊಳ್ಳುವ ಸುಖ ಮತ್ತು ಅದರ ಯಾತನೆ ಅವರಿಗೇ ಗೊತ್ತು. about.com ಎನ್ನುವ ವೆಬ್ ಸೈಟಿನಲ್ಲಿ ಸಿಗರೇಟು ಬಿಡಲು ಪ್ರಯತ್ನಿಸುತ್ತಿರುವವರು ಮಾತನಾಡಿಕೊಳ್ಳಲು ಇರುವ ಜಾಗದಲ್ಲಿ ಜಾನ್ ಎನ್ನುವವನೊಬ್ಬ ತಾನು ಕೊನೆಯ ಸಿಗರೇಟಿನೊಂದಿಗೆ ಮಾತನಾಡುತ್ತ ಬರೆದ ಈ ಪತ್ರ ಪ್ರಕಟಿಸಿದ. ಅದನ್ನು ಓದಿದ ಹಲವರು ಇದು ನನ್ನದೇ ಅಭಿಪ್ರಾಯ ಎನ್ನತೊಡಗಿದರು. ಈಗ ಈ ಪತ್ರ ಜಗತ್ತಿನ ಪ್ರಸಿದ್ದ ಪ್ರೇಮ ವಿದಾಯ ಪತ್ರಗಳ [...]
ಕ್ರೆಡಿಟ್ ಕಾರ್ಡ್ ನೀವು ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ, ಮೈತುಂಬಾ ಕಣ್ಣುಗಳಿರಬೇಕಾದ ಕಾಲವಿದು. ಕ್ರೆಡಿಟ್ ಕಾರ್ಡ್ಗಳನ್ನು ಎದ್ವಾ ತದ್ವಾ ಬಳಸಿ ಪೇಚಿಗೆ ಸಿಕ್ಕಿಕೊಳ್ಳುವವರ ಕಷ್ಟ ಒಂದು ಕಡೆಯಾದರೆ, ತಮ್ಮ ತಪ್ಪೇನೂ ಇಲ್ಲದೆ ಬೇರೆಯವರ ವಂಚನೆಗೆ ಗುರಿಯಾಗಿ ಫಜೀತಿಗೆ ಸಿಕ್ಕಿಕೊಳ್ಳುವವರ ಗೋಳು ಇನ್ನೊಂದು ಕಡೆ. ಇತ್ತೀಚೆಗೆ ಮುಂಬಯಿಯಲ್ಲಿ ಪತ್ತೆ ಹಚ್ಚಲಾಗಿರುವ ಪ್ರಸಂಗವೊಂದನ್ನು ನೋಡಿ. ಮುಂಬಯಿಯ ಬಾಂದ್ರಾ ಏರಿಯಾದಲ್ಲಿ ಕಿಂಗ್ಸ್ ಇಂಟರ್ ನ್ಯಾಷನಲ್ ಎನ್ನುವ ಒಂದು ಒಳ್ಳೆಯ ಹೊಟೇಲ್ ಇದೆ. ಅಲ್ಲಿಗೆ ಹೋಗುವ ಬಹುಪಾಲು ಜನರು ಬಿಲ್ ಕೊಡಲು ಕ್ರೆಡಿಟ್ ಕಾರ್ಡ್ಗಳನ್ನು ಬಳಸುತ್ತಾರೆ. [...]